ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ… ಮೈಸೂರು,ಆ,29,2019(..): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಆದ ಬಳಿಕ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಬಿ.ಎಸ್ ಯಡಿಯೂರಪ್ಪ ಆಗಮಿಸಿದ್ದು, ಸಿಎಂ ಬಿಎಸ್ ವೈಗೆ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿ ಹಲವರು ಸಾಥ್ ನೀಡಿದರು. ಈ ವೇಳೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಕೆ.ಆರ್ ಎಸ್ ಗೆ ತೆರಳಿ ಬಾಗೀನ ಅರ್ಪಿಸಲಿದ್ದಾರೆ. ಸಿಎಂ ಬಿಎಸ್ ವೈಗೆ ಹಾರ ಹಾಕಿ ಸ್ವಾಗತಿಸಿದ ಮಾಜಿ ಸಚಿವ ಜಿ.ಟಿ ದೇವೇಗೌಡ… ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಬಿಎಸ್‌ ಯಡಿಯೂರಪ್ಪಗೆ ಮಾಜಿ ಸಚಿವ ಜಿಟಿ ದೇವೇಗೌಡ ಹಾರ ಹಾಕಿ ಸ್ವಾಗತಿಸಿದರು. ಇದು ವಿಶೇಷವಾಗಿತ್ತು. ಸಿಎಂ ಬಿಎಸ್ ವೈಗೆ ಚಾಮುಂಡೇಶ್ವರಿ ತಾಯಿಯ ಫೋಟೊ ನೀಡಿದ ಸಂಸದ ಪ್ರತಾಪ್ ಸಿಂಹ… ಸಿಎಂ ಬಿಎಸ್ ಯಡಿಯೂರಪ್ಪಗೆ ಸಂಸದ ಪ್ರತಾಪ್‌ ಸಿಂಹ ತಾಯಿ ಚಾಮುಂಡಿಯ ಫೋಟೋ ನೀಡಿ ಗೌರವಿಸಿದರು. ಇದೇವೇಳೆ ಶಾಸಕ ರಾಮದಾಸ್ ಕೂಡ ಉಪಸ್ಥಿತರಿದ್ದರು. ಹಲವು ದಿನಗಳಿಂದ ಮುನಿಸಿಕೊಂಡಿದ್ದ ಶಾಸಕ ರಾಮದಾಸ್ ಇದೀಗಾ ಸಿಎಂ ಯಡಿಯೂರಪ್ಪ ಆಗಮನದ ಹಿನ್ನೆಲೆ ಪ್ರತ್ಯಕ್ಷವಾಗಿದ್ದಾರೆ. ಸಚಿವ ಆರ್ ಅಶೋಕ್ ಕಾಲಿಗೆ ನಮಸ್ಕರಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ಸಿಎಂ ಯಡಿಯೂರಪ್ಪ ಜೊತೆ ಆಗಮಿಸಿದ್ದ ಆರ್ ಅಶೋಕ್ ಅವರ ಕಾಲಿಗೆ ಸಂಸದ ಪ್ರತಾಪ್ ಸಿಂಹ ನಮಸ್ಕರಿಸಿದರು. ಸಿಎಂ ಸ್ವಾಗತಿಸುವ ವೇಳೆ ಅಶೋಕ್ ಕಾಲಿಗೆ ಬಿದ್ದು ಪ್ರತಾಪ್ ‌ಸಿಂಹ ನಮಸ್ಕರಿಸಿದರು. : – - - .