ಕೊಯ್ಲಿ ಎಫೆಕ್ಟ್: ಪುಸ್ತಕ ಸೋಲ್ಟ್’ಔಟ್ ನವದೆಹಲಿ, ಸೆಪ್ಟೆಂಬರ್ 29, 2019 (..): ಭಾರತ-ವೆಸ್ಟ್​ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್​ ರೂಂನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ’ ನಿಮ್ಮ ಅಹಂ ತ್ಯಜಿಸಿ’ ( ) ಎಂಬ ಪುಸ್ತಕ ಓದುತ್ತಾ ಕುಳಿತಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಪರಿಣಾಮವೆಂಬಂತೆ ಇದೀಗ ಈ ಪುಸ್ತಕ ಅಮೆಜಾನ್ ಆನ್​ಲೈನ್​ ಸೇಲ್​​ ವೆಬ್​ಸೈಟ್ನಲ್ಲಿ ಕಂಪ್ಲೀಟ್ ಸೋಲ್ಡ್ ಔಟ್ ಆಗಿದೆ. ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್​ ಮಾಡಲಾಗಿದೆ. ಅಮೆಜಾನ್​ನ ಇಂಡಿಯನ್​ ಆವೃತ್ತಿ ವೆಬ್​ಸೈಟ್​​​ನಲ್ಲಿ ಎಲ್ಲಾ ಪುಸ್ತಕಗಳು ಮಾರಾಟವಾಗಿವೆ. ನಿಮಗೆ ಒಂದು ವೇಳೆ ಪುಸ್ತಕ ಬೇಕಾಗಿದ್ದಲ್ಲಿ ಅಮೆಜಾನ್​ ಯುಕೆ ವೆಬ್​ಸೈಟ್​ಗೆ ವಿಸಿಟ್ ಮಾಡಿ ಎಂದು ಗ್ರಾಹಕರಿಗೆ ಮನವಿ ಮಾಡಿದೆ.