ಕೆ.ಆರ್ ಎಸ್ ಸಂಪೂರ್ಣ ಭರ್ತಿ ಹಿನ್ನೆಲೆ: ಬಾಗೀನ ಅರ್ಪಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ… ಮಂಡ್ಯ,ಆ.29,2019(..): ಇತ್ತೀಚೆಗೆ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಈ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಕೆ.ಆರ್ ಎಸ್ ಜಲಾಶಯಕ್ಕೆ ಬಾಗೀನ ಅರ್ಪಿಸಿದರು. ಕಾವೇರಿಗೆ ಪುರೋಹಿತರ ನೇತೃತ್ವದಲ್ಲಿ ಪೂಜೆ ನೆರವೇರಿಸಿ, ಮಂತ್ರ ಘೋಷಗಳ ನಡುವೆಯೇ ತಾಯಿ ಕಾವೇರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಿಎಂ ಬಿಎಸ್ ಯುಡಿಯೂರಪ್ಪ ಕೆ.ಆರ್ ಎಸ್ ಗೆ ಬಾಗೀನ ಅರ್ಪಿಸಿದರು. ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾ ತಂಡದ ನೇತೃತ್ವದಲ್ಲಿ ಬಾಗಿನ ಅರ್ಪಣೆ ಕಾರ್ಯ ನಡೆಯಿತು. ಸಿಎಂ ಆಗಿ 4ನೇ ಬಾರಿಗೆ ಬಿಎಸ್ ಯಡಿಯೂರಪ್ಪ ಬಾಗಿನ ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ 2008ರಿಂದ ಸತತವಾಗಿ ಮೂರು ಬಾರಿ ಬಾಗಿನ ಅರ್ಪಿಸಿದ್ದರು. ಸಿಎಂಗೆ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಮಂಡ್ಯ, ಮೈಸೂರು ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು. : - - - -