‘ನೀನು ಇಲ್ಲಿಂದ ಬೇಗ ಹೋಗ್ತೀಯಾ’-ಚಾಮುಂಡಿಬೆಟ್ಟದಲ್ಲಿ ಡಿಸಿಪಿಗೆ ಏಕವಚನದಲ್ಲೇ ಅವಾಜ್ ಹಾಕಿದ ಸಿಎಂ ಬಿಎಸ್ ವೈ ಸೋದರಳಿಯ…. ಮೈಸೂರು,ಆ,29,2019(..): ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆಯೇ ಇವರ ಸೋದರಳಿಯ ಪೊಲೀಸರ ಮೇಲೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಭದ್ರತಾ ದೃಷ್ಠಿಯಿಂದ ಸಿಎಂ ಬಿಎಸ್ ವೈ ಅವರ ತಂಗಿ ಮಗ ರಾಜೇಶ್ ರನ್ನ ದೇಗುಲದ ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಸಿಎಂ ಬಿಎಸ್ ವೈ ಅಳಿಯ ರಾಜೇಶ್ , ನೀನು ಇಲ್ಲಿಂದ ಬೇಗ ಹೋಗ್ತೀಯಾ..ಸಿಎಂ ಬಿಎಸ್ ಯಡಿಯೂರಪ್ಪ ನಮ್ಮ ಮನೆಗೆ ಬರ್ತಾರೆ . ಆಗ ನಿಮ್ಮ ಬಗ್ಗೆ ಪರ್ಸನಲ್ ಆಗಿ ದೂರು ನೀಡುತ್ತೇನೆ ಎಂದು ಡಿಸಿಪಿಗೆ ಅವಾಜ್ ಹಾಕಿದ್ದಾರೆ. ಸಿಎಂ ಆಳಿಯನ ಬಳಿಕ ಕಾರ್ಯಕರ್ತನೂ ಸಹ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಈ ಮೂಲಕ ಚಾಮುಂಡಿಬೆಟ್ಟದಲ್ಲಿ ಸಿಎಂ ಬಿಎಸ್ ವೈ ಅಳಿಯ ಪೊಲೀಸರ ಮೇಲೆಯೇ ದರ್ಬಾರ್ ಮಾಡಿರುವ ಘಟನೆ ನಡೆದಿದೆ. : –- --- – - --