ನಾಳಿನ ರಾಜ್ಯ ಬಜೆಟ್ ಬಗ್ಗೆ ಯಾವ ನಿರೀಕ್ಷೆಯೂ ಇಲ್ಲ- ವಿಪಕ್ಷ ನಾಯಕ ಆರ್.ಅಶೋಕ್. ಬೆಂಗಳೂರು,ಫೆಬ್ರವರಿ,15,2024(..):ನಾಳೆ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು ಲೋಕಸಭೆ ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ಜನರ ನಿರೀಕ್ಷೆಗಳು ಹೆಚ್ಚಿವೆ. ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ನಾಳಿನ ರಾಜ್ಯ ಬಜೆಟ್ ಬಗ್ಗೆ ಯಾವ ನಿರೀಕ್ಷೆಯೂ ಇಲ್ಲ. ಸಿಎಂ ಸಿದ್ದರಾಮಯ್ಯ ಆ ಇಲಾಖೆಯಿಂದ ಈ ಇಲಾಖೆಗೆ ಹುಡುಕುವ ಕೆಲಸ ಮಾಡುತ್ತಾರೆ. ನೀರಾವರಿ, ಕೃಷಿ, ಆರೋಗ್ಯಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಬೇಕು. ಹಿಂದಿನ ಬಜೆಟ್ ನಲ್ಲಿಯೇ ಎಲ್ಲದಕ್ಕೂ ಹಣ ಕಡಿತ ಮಾಡಿದ್ದಾರೆ. ಹೀಗಾದರೇ ಹೇಗೆ ನಿರೀಕ್ಷೆ ಇಟ್ಟುಕೊಳ್ಳಬೇಕು. ಈ ದರಿದ್ರ ಸರ್ಕಾರದಿಂದ ನಮಗೆ ಏನು ನಿರೀಕ್ಷೆ ಇಲ್ಲ ಎಂದು ಕಿಡಿಕಾರಿದರು. : - –- – -. .