ಕೆ.ಜಿಎಫ್ 2 ಚಿತ್ರದ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ… ಕೋಲಾರ,ಆ,27,2019(..): ನಟ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿರುವ ಕೆಜಿಎಫ್-2 ಚಿತ್ರದ ಚಿತ್ರೀಕರಣಕ್ಕೆ ಕೋಲಾರ ಕೆಜಿಎಫ್ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಕೋಲಾರದ ಕೆ ಜಿ ಎಫ್ ನ ಕೆನಿಡೀಸ್ ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣಕ್ಕೆ ಕೆಜಿಎಫ್ -2 ಚಿತ್ರತಂಡ ಸೆಟ್ ಹಾಕಿತ್ತು. ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕುವ ವೇಳೆ ಮರಗಿಡಗಳಿಗೆ ತೊಂದರೆಯಾಗಿದೆ. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಕೆಜಿಎಫ್-2 ಚಿತ್ರದ ಶೂಟಿಂಗ್ ಗೆ ತಡೆ ನೀಡಬೇಕೆಂದು ಶ್ರೀನಿವಾಸ್ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಕೋಲಾರದ ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಕೆಜಿಎಫ್ 2 ಚಿತ್ರದ ಚಿತ್ರೀಕರಣವನ್ನು ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಂತಹ ಶೂಟಿಂಗ್ ಗೆ ತಡೆ ನೀಡಬೇಕು. ಸೈನೈಡ್ ಗುಡ್ಡದಲ್ಲಿ ಶೂಟಿಂಗ್ ಗೆ ಅವಕಾಶ ನೀಡಬಾರದು ಎಂದು ಶ್ರೀನಿವಾಸ್ ಎಂಬುವರು ಕೋಲಾರದ ಕೆಜಿಎಫ್ ನ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೆಜಿಎಫ್ ನ ಸಿವಿಲ್ ಕೋರ್ಟ್ , ಶ್ರೀನಿವಾಸ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಕೋಲಾರದ ಕೆಜಿಎಫ್ ನ ಸೈನೈಡ್ ಗುಡ್ಡದಲ್ಲಿ ನಡೆಸಲಾಗುತ್ತಿದ್ದ ಶೂಟಿಂಗ್ ನಡೆಸದಂತೆ ತಡೆ ನೀಡಿ, ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿದೆ. ಹೀಗಾಗಿ ನಟ ಯಶ್ ಅಭಿನಯದ ಕೆಜಿಎಫ್ – 2 ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. : - - - –-2 -