ಕೆ.ಆರ್ ಎಸ್ ಸಂಪೂರ್ಣ ಭರ್ತಿ ಹಿನ್ನೆಲೆ: ನಾಳೆ ಸಿಎಂರಿಂದ ಬಾಗೀನ ಅರ್ಪಣೆ… ಮಂಡ್ಯ,ಆ,28,2019(..): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಬಾಗೀನ ಅರ್ಪಣೆ ಮಾಡಲಿದ್ದಾರೆ. ನಾಳೆ ಕೆ.ಆರ್ ಎಸ್ ಗೆ ಆಗಮಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಂಪ್ರದಾಯದಂತೆ ಕೆ.ಆರ್.ಎಸ್ ಜಲಾಶಯಕ್ಕೆ ಬಾಗೀನ ಅರ್ಪಿಸಲಿದ್ದಾರೆ. ಈ ಬಾಗೀನ‌ ಕಾರ್ಯಕ್ರಮದಲ್ಲಿ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪಾಲ್ಗೊಳ್ಳಲಿದ್ದಾರೆ. ಬಾಗೀನ ಅರ್ಪಣೆ ಬಗ್ಗೆ ಸಿ.ಎಂ.‌ಕಚೇರಿಯಿಂದ ಕಾವೇರಿ ನೀರಾವರಿ ನಿಗಮಕ್ಕೆ ಅಧಿಕೃತ ಅದೇಶ ರವಾನೆಯಾಗಿದ್ದು ಶುಕ್ರವಾರ ಬಾಗೀನ ಅರ್ಪಣೆಗೆ ಜಲಾಶಯದ ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. : - – - -