ದಸರಾ ಗಜಪಡೆ ಆನೆಗಳ ತೂಕ ಲೆಕ್ಕಾಚಾರ: ಕಳೆದ ವರ್ಷಕ್ಕಿಂತ ಈ ಬಾರಿ ಕೊಂಚ ಬಲಿಷ್ಟನಾಗಿರುವ ಕ್ಯಾಪ್ಟನ್ ಅರ್ಜುನ.. ಮೈಸೂರು,ಆ,27,2019(..): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಿನ್ನೆಯಷ್ಟೆ ಅರಮನೆ ಅಂಗಳಕ್ಕೆ ಆಗಮಿಸಿರುವ ಮೊದಲ ಹಂತದ ದಸರಾ ಗಜಪಡೆಯ ಆನೆಗಳ ತೂಕ ಹಾಕಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಆನೆಗಳ ತೂಕದಲ್ಲಿ ಕೊಂಚ ಏರಿಕೆಯಾಗಿದೆ. ಮೈಸೂರಿಗೆ ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಮೊದಲ ಹಂತದ 6 ಆನೆಗಳ ತೂಕವನ್ನ ವೈದ್ಯಧೀಕಾರಿ ನಾಗರಾಜು ನೇತೃತ್ವದಲ್ಲಿ ಲೆಕ್ಕ ಹಾಕಲಾಯಿತು. ಕಳೆದ ವರ್ಷಕ್ಕಿಂತ ಈ ಬಾರಿ ಆನೆಗಳ ತೂಕದಲ್ಲಿ ಕೊಂಚ ಏರಿಕೆಯಾಗಿದ್ದು ಕ್ಯಾಪ್ಟನ್ ಅರ್ಜುನ ಸಹ ಕಳೆದ ಬಾರಿಗಿಂತ ಈಬಾರಿ ಕೊಂಚ ಬಲಿಷ್ಟನಾಗಿದ್ದಾನೆ. ಕಳೆದ ಭಾರಿ 5600 ಕೆ.ಜಿ.ತೂಕ ಇದ್ದ ಕ್ಯಾಪ್ಟನ್ ಅರ್ಜುನ ಈಗ ಬರೋಬ್ಬರಿ 5800 ಕೆ.ಜಿ.ತೂಕವಿದ್ದಾನೆ. ಈಗ 200 ಕೆ.ಜಿ. ಹೆಚ್ಚಿಗೆ ತೂಗಿದ್ದಾನೆ. ಉಳಿದಂತೆ ಅರ್ಜುನನ ಸಂಗಾತಿಗಳಾದ ವರಲಕ್ಷ್ಮಿ- 3,510 ಕೆಜಿ, ವಿಜಯಾ 2,825 ಕೆಜಿ, ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ ಈಶ್ವರ- 3,995 ಕೆಜಿ ತೂಗಿದ್ದಾನೆ, ಭವಿಷ್ಯದ ಅಂಬಾರಿ ಹೊರುವ ಆನೆ ಎಂದು ಬಿಂಬಿತವಾದ ಧನಂಜಯ 4,460 ಕೆಜಿ ಇದ್ದಾನೆ. ಕಾರ್ಯಾಚರಣೆಗಳ ರಾಜ ಅಭಿಮನ್ಯು 5,145 ಕೆಜಿ ಇದ್ದು,ಇಂದಿನಿಂದ ದಸರಾ ಆನೆಗಳಿಗೆ ದಸರಾ ವಿಶೇಷ ಆಹಾರ ಸಿಗಲಿದೆ. ಇಂದಿನಿಂದಲೇ ಆನೆಗಳಿಗೆ ತಾಲೀಮು ಶುರುವಾಗಿದೆ. ಪ್ರಸ್ತುತ ಆನೆಗಳ ತೂಕ. ಅರ್ಜುನ- 5,800 ವರಲಕ್ಷ್ಮಿ- 3,510 ಈಶ್ವರ- 3,995 ಧನಂಜಯ- 4,460 ವಿಜಯಾ- 2,825 ಅಭಿಮನ್ಯು- 5,145 ಕಳೆದ ವರ್ಷದ ಆನೆಗಳ ತೂಕ. ಅರ್ಜುನ- 5,650 ಧನಂಜಯ- 4,045 ವರಲಕ್ಷ್ಮಿ- 3,120 ಅಭಿಮನ್ಯು- 4,930 ವಿಜಯಾ- 2,790 : - - – -.