ವೀರನ ಹೊಸಹಳ್ಳಿ ಗೇಟ್ ಬಳಿ ಯುವಕನ ಮೇಲೆ ಕರಡಿ ದಾಳಿ… ಮೈಸೂರು,ಆ,26,2019(..): ಯುವಕನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ವೀರನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ವೀರನಹೊಸಹಳ್ಳಿ ಗ್ರಾಮದ ವಿಜಯ್ ಮೇಲೆ ಕರಡಿ ದಾಳಿ ನಡೆಸಿದೆ. ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿದ್ದು, ಯುವಕನ ತಲೆ ಮತ್ತು ಕೈಗೆ ಕಚ್ವಿದೆ. ಕರಡಿ ದಾಳಿಯಿಂದ ಯುವಕ ಕಿರುಚುತ್ತಿದ್ದಾಗ ದಾರಿಹೋಕರು ರಕ್ಷಣೆಗೆ ಧಾವಿಸಿದರು. ಗಾಯಾಳು ವಿಜಯ್ ನನ್ನ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. : - – -