ಕೊನೆಗೂ 17 ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಯಾವ ಖಾತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ … ಬೆಂಗಳೂರು,ಆ,26,2019(..): ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ಒಂದು ತಿಂಗಳ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗಿದೆ. ಇಂದು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನ ರಾಜಭವನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ರವಾನಿಸಿದ್ದರು. ಇದೀಗ ಯಾವ ಸಚಿವರಿಗೆ ಯಾವ ಯಾವ ಖಾತೆ ಎಂಬುದು ತಿಳಿದು ಬಂದಿದೆ. ಜಗದೀಶ್ ಶೆಟ್ಟರ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಬಸವರಾಜ ಬೊಮ್ಮಾಯಿ ಅವರಿಗೆ ಇಂಧನ ಖಾತೆ ನೀಡಲಾಗಿದೆ. ಯಾರಿಗೆ ಯಾವ ಯಾವ ಖಾತೆ ಮಾಹಿತಿ ಇಲ್ಲಿದ ನೋಡಿ… ಜಗದೀಶ್ ಶೆಟ್ಟರ್- ಬೃಹತ್ ಮತ್ತುಮಧ್ಯಮ ಕೈಗಾರಿಕೆ ಬಸವರಾಜ ಬೊಮ್ಮಾಯಿ- ಇಂಧನ ಖಾತೆ ವಿ.ಸೋಮಣ್ಣ- ವಸತಿ ಖಾತೆ ಕೆ.ಎಸ್ ಈಶ್ವರಪ್ಪ- ಸಮಾಜ ಕಲ್ಯಾಣ ಇಲಾಖೆ ಲಕ್ಷ್ಮಣ್ ಸವದಿ- ಸಹಕಾರ ಖಾತೆ ಅಶ್ವಥ್ ನಾರಾಯಣ್- ಬೆಂಗಳೂರು ಅಭಿವೃದ್ಧಿ, ಗೃಹ ಖಾತೆ ಆರ್ ಅಶೋಕ್- ಕಂದಾಯ ಖಾತೆ ಗೋವಿಂದ ಕಾರಜೋಳ- ಲೋಕೋಪಯೋಗಿ ಖಾತೆ ಜೆಸಿ ಮಾಧುಸ್ವಾಮಿ- ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಖಾತೆ ಸಿಟಿ ರವಿ- ಗ್ರಾಮೀಣಾಭಿವೃದ್ಧಿ ಸುರೇಶ್ ಕುಮಾರ್- ಉನ್ನತ ಶಿಕ್ಷಣ ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆ ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿ.ಸಿ ಪಾಟೀಲ್ -ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮುಜರಾಯಿ ಕೋಟಾ ಶ್ರೀನಿವಾಸ್ ಪೂಜಾರಿ- ಮೀನುಗಾರಿಕೆ ಮತ್ತು ಬಂದರು ಎಚ್. ನಾಗೇಶ್ -ತೋಟಗಾರಿಕೆ : 17 – ---