ಹಾಲು ಕುಡಿಯುವ ಮಕ್ಕಳೇ ಬದುಕಲ್ಲ: ವಿಷ ಕುಡಿದವರು ಬದುಕುತ್ತಾರಾ..? –ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ,ಆ.26,2019(..): ರೆಬಲ್ ಶಾಸಕರನ್ನ ಇಟ್ಟುಕೊಂಡು ಸರ್ಕಾರ ನಡೆಸಲು ಆಗುತ್ತದೆಯೇ..? ಹೀಗಾಗಿ ಬಿಜೆಪಿ ಸರ್ಕಾರ ಬಹಳ ದಿನ ಇರಲ್ಲ. ಹಾಲು ಕುಡಿಯುವ ಮಕ್ಕಳೇ ಬದುಕಲ್ಲ: ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದಾರೆ. ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ಅವರು ದೆಹಲಿ-ಬೆಂಗಳೂರು ಮಧ್ಯೆ ಟೂರ್ ಹೊಡೆಯುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಬಿಎಸ್ ವೈ ಸರ್ಕಾರ ಕೇಂದ್ರದಿಂದ ಸೂಕ್ತ ಪರಿಹಾರ ತರುವ ಕೆಲಸ ಮಾಡಿಲ್ಲ. ಈಗಲಾದರೂ ಜನರ ಕಡೆ ನೋಡಲಿ. ಅವರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಸಲಹೆ ನೀಡಿದರು. ಪ್ರಸ್ತುತ ಸರ್ಕಾರದ ಬೆಳವಣಿಗೆಗಳನ್ನು ನೋಡಿದರೆ ಬಹಳ ಕಾಲ ನಡೆಯುವ ಸಾಧ್ಯತೆಗಳು ಕಡಿಮೆ. ಅತೃಪ್ತರನ್ನಿಟ್ಟುಕೊಂಡು ಬಹಳ ದಿನ ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ. ಹಾಲು ಕುಡಿಯುವ ಮಕ್ಕಳೆ ಬದುಕಲ್ಲ. ಇನ್ನ ವಿಷ ಕುಡಿದವರು ಬದುಕುತ್ತಾರೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಜೆಡಿಎಸ್ ವಿರುದ್ದವೂ ಕಿಡಿಕಾರಿದ ಸಿದ್ದರಾಮಯ್ಯ, ಬೈರತಿ ಬಸವರಾಜು ಮತ್ತು ಸೋಮಶೇಖರ್‍ ರನ್ನ ನಾನು ಮುಂಬೈಗೆ ಕಳುಹಿದ್ದೇನೆ ಅಂತಾರೆ, ಹಾಗಾದರೆ ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯರನ್ನ ಕಳುಹಿಸಿದ್ದು ಯಾರು? ಹೆಚ್‍ಡಿಕೆ, ಹೆಚ್‍ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. : -- –-