ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ- ಸರ್ಕಾರದ ವಿರುದ್ದ ಹೆಚ್.ಡಿಕೆ ವಾಗ್ದಾಳಿ. ಬೆಂಗಳೂರು, ಫೆಬ್ರವರಿ,15,2024(..):ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಮಾತನಾಡಿದ ಹೆಚ್.ಡಿಕೆ, ಕೇಂದ್ರ ಸರ್ಕಾರದ ಶಿಕ್ಷಣ ನೀತಿ ರದ್ದು ಮಾಡ್ತಿದ್ದೀರಿ. ಇತ್ತ ಅತಿಥಿ ಶಿಕ್ಷಕರು ಕೆಲಸ ಕಾಯಂ ಮಾಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. 8 ತಿಂಗಳ ನಿಮ್ಮ ಸಾಧನೆ ಹೇಳಿದ್ರೆ ನಿಮಗೆ ಬೇಜಾರಾಗುತ್ತದೆ. ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದರೇ ಕಠಿಣ ಆಗುತ್ತದೆ. ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ. ರಾಜ್ಯದ ಖಜಾನೆ ಖಾಲಿ ಆಗಿದೆ ಅಂತಾ ನಾನು ಹೇಳಲ್ಲ. ನಮ್ಮ ರಾಜ್ಯದ ಸಂಪತ್ತಿ ಉತ್ತಮವಾಗಿದೆ ಎಂದರು. : -5 - –- - - -.