ಜಿಮ್ ಗೆ ಬಂದವರಿಗೆ ಹಾನಿಕಾರಕ ಔಷಧಿ ನೀಡುತ್ತಿದ್ದ ಟ್ರೈನರ್ ಬಂಧನ… ಬೆಂಗಳೂರು,ಆ,24,2019(..): ಜಿಮ್ ಗೆಂದು ಬಂದವರಿಗೆ ಹಾನಿಕಾರಕ ಔಷಧಿ ನೀಡುತ್ತಿದ್ದ ಟ್ರೈನರ್ ನನ್ನ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಬಂಧಿತ ಬಾಡಿ ಬಿಲ್ಡರ್. ಶಿವಕುಮಾರ್ ಬೆಂಗಳೂರಿನ ಚಾಮರಾಜಪೇಟೆಯ 4ನೇ ರಸ್ತೆಯಲ್ಲಿ ಅಲ್ಟಿಮೇಟ್ ಫಿಟ್ನೇಸ್ ಹೆಸರಿನಲ್ಲಿ ಜಿಮ್ ತೆರದಿದ್ದನು.ಈ ನಡುವೆ ಜಿಮ್ ಗೆ ಬರುವವರಿಗೆ ದೇಹ ದಪ್ಪಗಾಗಿಸಲು ಮತ್ತು ದೇಹ ಸಣ್ಣಗಾಗಿಸಲು ಹಾನಿಕಾರಕ ಔಷಧಿ ನೀಡಿತ್ತಿದ್ದನು ಎನ್ನಲಾಗಿದೆ. ಈ ವಿಚಾರ ತಿಳಿದ ಪೊಲೀಸರು ದಾಳಿ ನಡೆಸಿದ್ದು ದಾಳಿ ವೇಳೆ ಸ್ಟಿರಾಯ್ಡ್ ಗಳು ಪತ್ತೆಯಾಗಿದೆ. ಇನ್ನು ಆರೋಪಿ ಶಿವಕುಮಾರ್ ನನ್ನ ಪೊಲೀಸರು ಬಂಧಿಸಿದ್ದಾರೆ. : - – - – -