ಕೃಷ್ಣನಂತೆ ಕೊಳಲು ನುಡಿಸಿದ ದೋನಿ ! ನವದೆಹಲಿ, ಆಗಸ್ಟ್ 24, 2019 (..): ಮಹೇಂದ್ರ ಸಿಂಗ್ ಧೋನಿ ಕೂಡ ಶ್ರೀಕೃಷ್ಣನ ಆರಾಧನೆ ಮಾಡಿದ್ದಾರೆ. ಇನ್ನು ಧೋನಿ ಕೊಳಲು ನುಡಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಧೋನಿ ಕೊಳಲು ಹಿಡಿದ ಶೈಲಿ ಹಾಗೂ ಆ ಸ್ವರವನ್ನು ಆಲಿಸಿದ ಅಭಿಮಾನಿಗಳು ತಲೆದೂಗುತ್ತಿದ್ದಾರೆ. ಧೋನಿಗೆ ಕೊಳಲು ನುಡಿಸುವ ಅಭ್ಯಾಸವಿದ್ದಂತೆ ಕಾಣುತ್ತದೆ. ಕೊಳಲು ನುಡಿಸುವ ವೇಳೆ ಧೋನಿ ಕಪ್ಪು ಕನ್ನಡಕವನ್ನು ಧರಿಸಿದ್ದಾರೆ. ಧೋನಿ ಕ್ಯಾಶುಯಲ್ ಜರ್ಸಿ ಧರಿಸಿದ್ದಾರೆ.