ಮೀ ಟೂ ಪ್ರಕರಣ: ಶೃತಿ ಹರಿಹರನ್’ಗೆ ಸಂಕಷ್ಟ ಬೆಂಗಳೂರು, ಆಗಸ್ಟ್ 23, 2019 (..): ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬೆಂಗಳೂರಿನ ನೆಷನ್ಸ್ ನ್ಯಾಯಾಲಯ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನಟ ಅರ್ಜುನ್ ಸರ್ಜಾ ಪರವಾಗಿ ಧ್ರುವ ಸರ್ಜಾ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಅರ್ಜುನ್ ಸರ್ಜಾ ನೇರವಾಗಿ ಮೊಕದ್ದಮೆ ಹೂಡಿರಲಿಲ್ಲ. ಎಲ್ಲಾ ವಿಚಾರಣೆಯನ್ನು ಮಾಡಿದ್ದ ನಂತರ, ಶೃತಿಯವರ ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ನ್ಯಾಯಾಲಯ ಧ್ರುವ ಸರ್ಜಾ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ.