ಟೀಂ ಇಂಡಿಯಾ ಆಟಗಾರರನ್ನು ಕೊಲ್ಲುತ್ತೇನೆಂದು ಈ-ಮೇಲ್ ಮಾಡಿದ್ದವರ ಈಗ ಪೊಲೀಸರ ಅತಿಥಿ ಮುಂಬೈ, ಆಗಸ್ಟ್ 23, 2019 (..): ಟೀಮ್ ಇಂಡಿಯಾ ಆಟಗಾರರನ್ನ ಕೊಲ್ಲುತ್ತೇನೆ ಎಂದು ಬಿಸಿಸಿಐಗೆ ಈ-ಮೇಲ್ ಮಾಡಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಸ್ಸಾಂ ಮೂಲದ 19 ವರ್ಷದ ಬ್ರಿಜ್ ಮೋಹನ್ ದಾಸ್ ಎಂಬ ಯುವಕ, ಕ್ರಿಕೆಟಿಗರನ್ನ ಕೊಲ್ಲುವ ಬೆದರಿಕೆ ಹಾಕಿ ಜೈಲು ಪಾಲಾಗಿರುವಾತ. ಆಗಸ್ಟ್ 16ರಂದು ಬ್ರಿಜ್ ಮೋಹನ್ ದಾಸ್, ಭಾರತೀಯ ಕ್ರಿಕೆಟ್ ಮಂಡಳಿಗೆ ಈ-ಮೇಲ್ ಮೂಲಕ ಬೆದರಿಕೆ ಒಡ್ಡಿದ್ದ. ಎಂಎಎಸ್ ಸೈಬರ್ ಎಕ್ಸ್​ಪರ್ಟ್​ಗಳ ಮೂಲಕ ಆರೋಪಿಯ ಹುಡುಕಾಟದಲ್ಲಿ ತೊಡಗಿತ್ತು. ಇದೀಗ ಆರೋಪಿಯನ್ನ ಅಸ್ಸಾಂನಲ್ಲಿ ಬಂಧಿಸಿರುವ ಮಹಾರಾಷ್ಟ್ರ ಌಂಟಿ ಟೆರರಿಸ್ಟ್ ಸ್ಕ್ವಾಡ್, ಆರೋಪಿಯನ್ನ ಮುಂಬೈಗೆ ಕರೆತಂದು ಕೋರ್ಟ್​ ಕಟಕಟೆಯಲ್ಲಿ ನಿಲ್ಲಿಸಿದೆ.