ಗೋಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ… ಬೆಂಗಳೂರು,ಆ,23,2019(..): ಗೋ ಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ವಾಹನವನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ. ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರಿಗೆ ದಂಧೆಕೋರರು ಗೋ ಮಾಂಸ ಸಾಗಿಸುತ್ತಿದ್ದರು. ಈ ವೇಳೆ ಯಲಹಂಕ ಉತ್ತರ ತಾಲೂಕಿನ ರಾಜನಕುಂಟೆ ಬಳಿ ಹಿಂದೂ ಜಾಗರಣ ವೇದಿಕೆ ಸದಸ್ಯರು ವಾಹನವನ್ನ ತಡೆದಿದ್ದಾರೆ. ಬಳಿಕ ವಾಹನವನ್ನ ಪೋಲಿಸರ ವಶಕ್ಕೆ ನೀಡಿದ್ದಾರೆ. ದಂಧೆಕೋರರು ಆಂದ್ರದ ಹಿಂದೂಪುರದಿಂದ ಬನ್ನೇರುಘಟ್ಟಕ್ಕೆ ಗೋ ಮಾಂಸ ಸಾಗಿಸುತ್ತಿದ್ದರು. ಇದೀಗ ಗೋಮಾಸದ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. : - – –- -