ಪುನರ್ಜನ್ಮದ ಕಥೆ ಕಟ್ಟಿ ಯುವತಿಯ ಮನಪರಿವರ್ತನೆ ಆರೋಪ: ಜ್ಯೋತಿಷಿಗೆ ಬಿತ್ತು ಸಖತ್ ಗೂಸಾ… ಬೆಂಗಳೂರು,ಆ,21,2019(..): ದೋಷಪರಿಹಾರ ವಾಸ್ತು ನೋಡುವ ನೆಪದಲ್ಲಿ ಪುನರ್ಜನ್ಮದ ಕಥೆ ಕಟ್ಟಿ ಯುವತಿಯ ಮನಪರಿವರ್ತನೆ ಮಾಡಿದ ಆರೋಪದ ಮೇಲೆ ಜ್ಯೋತಿಷಿಯನ್ನ ಹಿಡಿದು ಸ್ಥಳೀಯರು ಗೂಸಾ ನೀಡಿರುವ ಘಟನೆ ಬೆಂಗಳೂರಿನ ಶ್ರೀನಿವಾಸ ನಗರ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ವೆಂಕಟಕೃಷ್ಣಚಾರ್ಯ ಎಂಬಾತನೇ ಗೂಸಾ ತಿಂದ ಜ್ಯೋತಿಷಿ. ಈತ ವಾಸ್ತುನೋಡುವ ನೆಪದಲ್ಲಿ ವಿಜಯನಗರನಗರದಲ್ಲಿ ವಾಸವಿರುವ ದಂಪತಿಯ ಪುತ್ರಿಗೆ ಪುನರ್ಜನ್ಮದ ಕಥೆ ಕಟ್ಟಿ ನಾನೇ ನಿನ್ನ ಪತಿ ಎಂದು ನಂಬಿಸಿದ್ದ. ಅಲ್ಲದೆ ಯುವತಿ ಬಳಿ ಲಕ್ಷಾಂತರ ರೂ ಹಣ ಪಡೆದಿದ್ದ ಎನ್ನಲಾಗಿದೆ. ಆ ಬಳಿಕ ಯುವತಿ ಜ್ಯೋತಿಷಿಯನ್ನೇ ಮದುವೆಯಾಗುವುದಾಗಿ ಪೋಷಕರ ಬಳಿ ಹಠ ಹಿಡಿದಿದ್ದಾಳೆ. ಈ ನಡುವೆ ಮಗಳ ನಿಲುವಿನಿಂದ ಕಂಗಾಲಾದ ಪೋಷಕರು ಈ ವಿಚಾರವನ್ನ ಮಹಿಳಾ ಸಂಘಟನೆ ಮತ್ತು ಸ್ಥಳೀಯರಿಗೆ ತಿಳಿಸಿದ್ದಾರೆ. ನಂತರ ಶ್ರೀನಿವಾಸನಗರ ಅಪಾರ್ಟ್ ಮೆಂಟ್ ನಲ್ಲಿದ್ದ ವಂಚಕ ಜ್ಯೋತಿಷಿಯನ್ನು ಹೊರಗೆ ಎಳೆತಂದು ಥಳಿಸಿದ ಸಾರ್ವಜನಿಕರು ಹನುಮಂತನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. : - - - – -