ಮೈಸೂರಲ್ಲಿ ಅರ್ಧ ಕಿ.ಮೀ ಉದ್ದದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್. ಮೈಸೂರು, ಆ.21, 2019 : (.. ) : ಸುಮಾರು ಅರ್ಧ ಕಿ.ಮೀ ಉದ್ದದ ರಾಜಕಾಲುವೆ ( ಸರಕಾರಿ ಹಳ್ಳ ) ವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ತಹಸೀಲ್ದಾರ್ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು. ಕುಂಬಾರಕೊಪ್ಪಲು ಪ್ರದೇಶದಲ್ಲೇ ಈ ಒತ್ತುವರಿ ತೆರವು ಕಾರ್ಯ ನಡೆದಿರುವುದು. ಮೈಸೂರು ಕಸಬಾ ಹೋಬಳಿ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಯಿತು. ಕಳೆದ ತಿಂಗಳಷ್ಟೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ನಗರ ಪ್ರದಕ್ಷಿಣೆ ನಡೆಸಿದ್ದರು. ಈ ವೇಳೆ ಶಾಸಕ ನಾಗೇಂದ್ರ ಅವರು ಕುಂಬಾರಕೊಪ್ಪಲಿನ ರಾಜಕಾಲುವೆ ಒತ್ತುವರಿ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಆಗ, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಜಿಟಿಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಒತ್ತುವರಿ ತೆರವುಗೊಳಿಸಿತು. ಈ ವೇಳೆ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರಗೌಡ, ನಗರ ಪಾಲಿಕೆ ಅಧಿಕಾರಿ ವಿರೇಶ್, ರೆವಿನ್ಯೂ ಇನ್ಸ್ ಪೆಕ್ಟರ್ ಪ್ರಶಾಂತ್, ಸರ್ವೆಯರ್ ಬಸವರಾಜು ಮತ್ತಿತರರು ಹಾಜರಿದ್ದರು. : -- - . ——– : ( ) . . , & ’ .