ಆಲಿಯಾ ಭಟ್ ಸ್ನೇಹಿತೆಯೊಂದಿಗೆ ರಾಹುಲ್ ಡೇಟಿಂಗ್ ?! ಬೆಂಗಳೂರು, ಆಗಸ್ಟ್ 21, 2019 (..): ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಕ್ರಿಕೆಟಿಗ ಕೆ.ಎಲ್. ರಾಹುಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆಯೇ? – ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕಾಂಕ್ಷಾ ಕೆಲವು ದಿನಗಳ ಹಿಂದೆ ಇನ್ ಸ್ಟಾಗ್ರಾಂನಲ್ಲಿ ರಾಹುಲ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ರಾಹುಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವುದು ರೂಮರ್ ಗೆ ಪುಷ್ಟಿ ನೀಡಿದೆ.