ನಂಜನಗೂಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ: ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್…. ಮೈಸೂರು,ಆ,20,2019(..): ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಇಂದು ನಂಜನಗೂಡಿಗೆ ಭೇಟಿ ನೀಡಿ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಙಧನ್ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಭಾರತಿ ವಿಷ್ಣು ವರ್ಧನ್ ಅವರಿಗೆ ನಟ ಅನಿರುಧ್, ವಿಷ್ಣುವರ್ಧನ್ ಅಭಿಮಾನಿಗಳು ಸಾಥ್ ನೀಡಿದರು. ಇದಾದ ಬಳಿಕ ನಟಿ ಭಾರತಿ ವಿಷ್ಣುವರ್ಧನ್ ಕಪಿಲಾ ಪ್ರವಾಹಕ್ಕೆ ಸಿಲುಕಿದವ್ರಿಗೆ ಸಾಂತ್ವನ ಹೇಳಿದ್ದಾರೆ. ನಂಜನಗೂಡಿನ ಗಂಜಿ ಕೇಂದ್ರಕ್ಕೆ ತೆರಳಿದ ಅವರು ಅಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳ ಜೊತೆ ಮಾತುಕತೆ ನಡೆಸಿದರು. ನಂತರ ಸ್ವೆಟರ್, ಬಟ್ಟೆ, ಬಿಸ್ಕೆಟ್, ಕೆಲ ವಸ್ತುಗಳನ್ನ ನೀಡಿದರು. : - – - - -