‘ಸಾಹೋ’ದಲ್ಲಿ ಪ್ರಭಾಸ್-ಜಾಕ್ವೆಲಿನ್ ಸ್ಪೆಷಲ್ ಸ್ಟೆಪ್ಸ್ ! ಮುಂಬೈ, ಆಗಸ್ಟ್20, 2019 (..):ಪ್ರಭಾಸ್ ‘ಸಾಹೋ’ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರ ಕುರಿತ ಹೊಸ ಸುದ್ದಿ ಎಂದರೆ ಚಿತ್ರದ ಸ್ಪೆಷಲ್ ಸಾಂಗ್ ಗೆ ಪ್ರಭಾಸ್ ಮತ್ತು ಜಾಕ್ಚೆಲಿನ್ ಫೆರ್ನಾಂಡಿಸ್ ಅವರು ಸ್ಟೆಪ್ ಹಾಕಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಈ ಹಾಡಿನ ಟ್ರ್ಯಾಕ್ ಬಿಡುಗಡೆಯಾಗಿದೆ. ಪ್ರಭಾಸ್ ಮತ್ತು ಜಾಕ್ವಲಿನ್ ಅವರ ಹಾಡಿನ ಸನ್ನಿವೇಶದ ಫೊಟೋ ಒಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಫೊಟೋದಲ್ಲಿ ಈ ಜೋಡಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದೆ.