ಮಂಗಳವಾರ ಸಚಿವ ಸಂಪುಟ ವಿಸ್ತರಣೆ, ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಚುರುಕು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರು, ಆಗಸ್ಟ್ 18, 2019 (..): ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಂಗಳವಾರ ನಡೆಯಲಿದೆ. ನೆರೆ ಹಾನಿ ಪ್ರದೇಶಗಳ ಕುರಿತುಸುದೀರ್ಘವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಚರ್ಚೆ ಆಗಿದೆ. ಇನ್ನೊಂದೆರಡು ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದಷ್ಟು ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ. ಅದರ ವಿವರ ಇಲ್ಲಿದೆ… * ಮಂಗಳವಾರ 3-4 ಗಂಟೆ ಹೊತ್ತಿಗೆ ಕ್ಯಾಬಿನೆಟ್ ರಚನೆ ಅಂತಿಮ ಆಗತ್ತೆ .. ಅಮಿತ್ ಷಾ ಜೊತೆ ಈ ಬಗ್ಗೆ ಮಾತನಾಡಿದ್ದೆನೆ . *ಸೋಮವಾರ ಮಧ್ಯಾಹ್ನ ಕ್ಯಾಬಿನೆಟ್ ರಚನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಫೈನಲ್ ಆಗತ್ತೆ .. *ಮೊದಲ ಹಂತದಲ್ಲಿ 13 – 14 ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ. * ಫೋನ್ ಟ್ಯಾಪಿಂಗ್ ವಿಚಾರ: ನಾಳೆ ಅಧಿಕಾರಿಗಳೊಂದಿಗೆ ಮಾತನಾಡಿ ಒಂದು ನಿರ್ಧಾರ ತಗೊತ್ತೇವೆ . * ನೆರೆ ಪೀಡಿತರಿಗೆ 10 ಸಾವಿರ ಒಂದೊಂದು ಕುಟುಂಬಕ್ಕೆ ಕೊಡೋದು ವಿಳಂಬ ಆಗಿದೆ. ಆ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸ್ತೇನೆ. * ಜನ ಧೃತಿಗೆಡುವುದು ಬೇಡ .. ಸರ್ಕಾರ ನಿಮ್ಮ ಜೊತೆ ಇದೆ. ಯಡಿಯೂರಪ್ಪಗೆ ಮೋದಿ ಬಳಿ ಹಣ ಕೇಳಲು ತಾಕತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ. ಅಧ್ಯಯನ ತಂಡ ವರದಿ ಕೊಡದೆ ಪರಿಹಾರ ಕೊಡೋದು ಸಾಧ್ಯವಿದೆಯಾ .? ಸಿದ್ದರಾಮಯ್ಯ ಈ ವಿಷಯ ತಿಳಿದುಕೊಳ್ಳಬೇಕು. ಪರಿಹಾರ ಹಣ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯನವರಿಗೆ ಅರ್ಥ ಆಗುತ್ತೆ.