ನೀವು ‘ಟಿಕ್ ಟಾಕ್’ ಆ್ಯಪ್ ಬಳಸುತ್ತೀರಾ…? ಹಾಗಾದರೆ ಈ ಸುದ್ದಿ ಓದಿ… ನವದೆಹಲಿ, ಆಗಸ್ಟ್ 18, 2019 (..): ನೀವು ಟಿಕ್​ ಟಾಕ್ ಆ್ಯಪ್ ಬಳಸುತ್ತೀದ್ದೀರಾ? ಹಾಗಾದರೆ ಈ ಸುದ್ದಿಯನ್ನು ಕಡ್ಡಾಯವಾಗಿ ಓದಿ… ಟಿಕ್ ಟಾಕ್ ಬಳಕೆದಾರರಿಗೆ ತಿಳಿಯದಂತೆ ಡೇಟಾವನ್ನು ಕದಿಯುವ ಮೋಸದ ಜಾಲವೊಂದು ಪತ್ತೆಯಾಗಿದೆ. ಟಿಕ್​ಟಾಕ್​ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್​​ ಮೇಲೆ ಕ್ಲಿಕ್​ ಮಾಡಿದಂತೆ ವಯಸ್ಕರ ಡೇಟಿಂಗ್​, ಅಶ್ಮೀಲ ಡೇಟಿಂಗ್​ ಸೈಟ್​ಗೆ ಕರೆದೊಯ್ಯುತ್ತದೆ. ವೆಬ್​ಸೈಟ್​ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದರೆ ಹಣ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತದೆ. ಅಲ್ಲದೇ ಹಣ ಪಾವತಿಸಿದ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​ಗಳ ಮಾಹಿತಿಗಳು ಹ್ಯಾಕರ್​ಗಳ ಪಾಲಾಗುತ್ತವೆ.