ಮೈಸೂರಿನಲ್ಲೊಂದು ಅಪರೂಪದ ಘಟನೆ : ವಾಷಿಂಗ್ ಮಿಷನ್ ನಲ್ಲಿ ಕಾಣಿಸಿಕೊಂಡ ‘ಬುಸ್ ಬುಸ್ ನಾಗಪ್ಪ’ ಮೈಸೂರು,ಆ,17,2019(..): ವಾಷಿಂಗ್ ಮಿಷನ್ ಬಳಸುವ ಗೃಹಿಣಿಯರು ಎಚ್ಚರವಾಗಿರಬೇಕು ಹೌದು, ವಾಷಿಂಗ್ ಮಷಿನ್ ನಲ್ಲಿ ಹಾವು ಸೇರಿಕೊಂಡಿದ್ದ ಅಪರೂಪದ ಘಟನೆ ಮೈಸೂರು ನಡೆದಿದೆ. ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮಷಿನ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಈ ನಡುವೆ ಸ್ಟಾಲಿನ್ ಕೆ.ಪೌಲ್ ಅವರ ಹೆಂಡತಿ, ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ. ತಕ್ಷಣ ಹೆಂಡತಿ ತನ್ನ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಷಯವನ್ನ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಮುಟ್ಟಿಸಲಾಗಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಅವರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. : -- -