ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು…. ಚಾಮರಾಜನಗರ,ಆ,16,2019(..): ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ಬಳಿ ನಡೆದಿದೆ. ಗುಂಡ್ಲುಪೇಟೆ ಹೊರ ವಲಯದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೈಸೂರಿನಲ್ಲಿ ಡಾಟಾ ಬೇಸ್ ಕಂಪನಿ‌ ನಡೆಸುತ್ತಿದ್ದ ಭಟ್ಟಾ ಚಾರ್ಯ ಹಾಗೂ ಓಂಕಾರ್ ಪ್ರಸಾದ್(38) ಅವರ ಕುಟುಂಬವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಖಿತಾ (30), ಪುತ್ರ ಆರ್ಯ(4), ಭಟ್ಟಾಚಾರ್ಯ (65), ಹೇಮು ( 60 ) ಮೃತಪಟ್ಟವರು. ನಿನ್ನೆ ನಂದಿ ರೆಸಿಡೆನ್ಸಿನಲ್ಲಿ ಓಂಪ್ರಕಾಶ್ ಕುಟುಂಬ ರೂಂ ಬುಕ್ ಮಾಡಿ ಉಳಿದುಕೊಂಡಿತ್ತು. ಈ ನಡುವೆ ರಾತ್ರಿ ಎರಡು ಗಂಟೆಯ ವೇಳೆಗೆ ಊಟಿ ರಸ್ತೆಯ ಜಮೀನಿಗೆ ಬಂದು ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಓಂಪ್ರಕಾಶ್ ಮತ್ತು ಅವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಆನಂದ್ ಕುಮಾರ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. …. . . . . . (38) (30), (4), ’ (65) (60). . “ ” , . 3 4 : - –- - –--