ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಮೇಕಿಂಗ್ ವಿಡಿಯೋ ಬಿಡುಗಡೆ: ಕಿಚ್ಚ ಸುದೀಪ್ ವೇಶಭೂಷಣಕ್ಕೆ ಅಭಿಮಾನಿಗಳು ಫಿದಾ ಹೈದರಾಬಾದ್​:ಆ-15:(..) ಅಭಿಮಾನಿಗಳು ಹಾಗೂ ಚಿತ್ರರಸಿಕರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸೈರಾ ನರಸಿಂಹರೆಡ್ಡಿ ಚಿತ್ರತಂಡ ಉಡುಗೊರೆಯೊಂದನ್ನು ನೀಡಿದೆ. ಹೌದು. ಮೆಗಾಸ್ಟಾರ್​ ಚಿರಂಜೀವಿ ಅಭಿನಯದ ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರ ‘ಸೈರಾ ನರಸಿಂಹರೆಡ್ಡಿ’ಯ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದೆ. ತೆಲುಗು ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಆಧಾರಿತ ಚಿತ್ರವಾಗಿದ್ದು, ಚಿತ್ರದಲ್ಲಿ ನರಸಿಂಹ ರೆಡ್ಡಿಯಾಗಿ ಮೆಗಾಸ್ಟಾರ್​ ಚಿರಂಜೀವಿ ಮಿಂಚಿದ್ದಾರೆ. ಅಮಿತಾಭ್​ ಬಚ್ಚನ್​, ಕಿಚ್ಚ ಸುದೀಪ್​, ವಿಜಯ್​ ಸೇತುಪತಿ, ತಮನ್ನಾ, ನಯನತಾರ ಹಾಗೂ ಜಗಪತಿಬಾಬು ಅವರ ಪಾತ್ರಗಳು ಹಾಗೂ ವೇಶಭೂಷಣಗಳು ಮನಸೆಳೆಯಲಿದೆ. ಅಲ್ಲದೆ, ಸಾಹಸ ದೃಶ್ಯಗಳು ರೋಚಕವಾಗಿದೆ. ಸೈರಾ…ಚಿತ್ರದಲ್ಲಿನ ಕಿಚ್ಚ ಸುದೀಪ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರವನ್ನು ಕೊನಿದೆಲಾ ಪ್ರೊಡಕ್ಸನ್​ ಅಡಿಯಲ್ಲಿ ನಟ ರಾಮ್​ ಚರಣ್ ತೇಜಾ ನಿರ್ಮಾಣ ಮಾಡುತ್ತಿದ್ದು, 200 ಕೋಟಿ ರೂ ವೆಚ್ಚದಲ್ಲಿ ಮೂಡಿ ಬರುತ್ತಿದೆ. ಬಹುತಾರಾಗಣವನ್ನು ಹೊಂದಿರುವ ಈ ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರಕ್ಕೆ ಸುರೇಂದ್ರ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಮೇಕಿಂಗ್​ ವಿಡಿಯೋ 1 ನಿಮಿಷ 47 ಸೆಕೆಂಡ್​ ಇದ್ದು, ಚಿತ್ರೀಕರಣದ ಸನ್ನಿವೇಶಗಳನ್ನು ಪೋಣಿಸಿ ಮೇಕಿಂಗ್​ ವಿಡಿಯೋ ತಯಾರಿಸಲಾಗಿದೆ. ಅಲ್ಲದೆ, ಪ್ರಮುಖ ಪಾತ್ರಗಳನ್ನು ಅನಾವರಣಮಾಡಲಾಗಿದೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ಮೇಕಿಂಗ್​ ವಿಡಿಯೋ ಭರ್ಜರಿಯಾಗಿದ್ದು, ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಆ.20ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.