ಇಂದು ಸಂಜೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ‘ಮುಮುಕ್ಷು’ ಕಿರುಚಿತ್ರ ಪ್ರದರ್ಶನ ಬೆಂಗಳೂರು, ಆಗಸ್ಟ್ 15, 2019 (..): ಇಂದು ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದ ಸಭಾಂಗಣದಲ್ಲಿ ‘ಮುಮುಕ್ಷು’ () ಕಿರುಚಿತ್ರದ ಪ್ರದರ್ಶನ ನಡೆಯಲಿದೆ. ಸೌರಬ್ ಕುಲಕರ್ಣಿ ನಿರ್ದೇಶನ ಮಾಡಿರುವ, ಸೋಮಶೇಖರ ಧುಪದ ನಿರ್ಮಾಣ ಮಾಡಿರುವ ಕಿರುಚಿತ್ರದ ಪ್ರದರ್ಶನಕ್ಕೆ ನಿರ್ದೇಶಕ ನಿರೂಪ್ ಭಂಡಾರಿ ಚಾಲನೆ ನೀಡಲಿದ್ದಾರೆ. ಹಿರಿಯ ನಟರಾದ ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ಅವರು ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದು ಕಿರುಚಿತ್ರದ ನಿರ್ದೇಶಕ ಸೌರಬ್ ಕುಲಕರ್ಣಿ ತಿಳಿಸಿದ್ದಾರೆ.