ರೋಟರಿ ಮೈಸೂರು ವತಿಯಿಂದ ವಿಶ್ವ ಅಂಗಾಗ ದಾನ ದಿನ: ‘ಪುನರ್ಜನ್ಮ’ ಜಾಗೃತಿ ಅಭಿಯಾನ….. ಮೈಸೂರು,ಆ,14,2019(..): ವಿಶ್ವ ಅಂಗಾಂಗ ದಿನದ ಅಂಗವಾಗಿ ಮೈಸೂರು ರೋಟರಿ ವತಿಯಿಂದ ಪುನರ್ಜನ್ಮ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ರೋಟರಿ ಶಾಲೆಯಲ್ಲಿ ವಿಶ್ವ ಅಂಗಾಂಗ ದಾನ ದಿನ ಪುನರ್ಜನ್ಮ ಜಾಗೃತಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಜಾಗೃತಿ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಚಾಲನೆ ನೀಡಿದರು, ಈ ಜಾಗೃತಿ ಕಾರ್ಯಕ್ರಮಕ್ಕೆ ಅಪೊಲೊ ಆಸ್ಪತ್ರೆ, ಅನ್ನಪೋರ್ಣ ಕಣ್ಣಿನ ಆಸ್ಪತ್ರೆ, ರೋಟರಿ ಮೈಸೂರು ಮಿಡ್-ಟೌನ್, ರೋಟರಿ ಪಂಚಸೀಲ್, ಲಯನ್ಸ್ ಕ್ಲಬ್, ಮೈಸೂರಿನ ಇನ್ನರ್ ವೀಲ್ ಕ್ಲಬ್, ರೌಂಡ್ ಟೇಬಲ್ 156 & 256 ಸೇರಿ ಹಲವು ಸಂಸ್ಥೆಗಳು ಕೈಜೋಡಿಸಿವೆ. ದಾನ ಮಾಡಿದ ಅಂಗ ದಾನಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗದಾನಿಗಳು ಸ್ವೀಕೃತರು ತಮ್ಮ ಅನುಭವಗಳನ್ನ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ರೋಟರಿ ಸಹಾಯಕ ಗವರ್ನರ್-ಆರ್.ಟಿ.ಎನ್. ರಾಘವೇಂದ್ರ, ಮಜೇಶ್ ಕುಮಾರ್, ಕಾರ್ಯದರ್ಶಿ ರವಿಶಂಕರ್, ಇನ್ನರ್ ವ್ಹೀಲ್ ಅಧ್ಯಕ್ಷ ಮಮತಾ ಮೋಹನ್, ರೋಟರಿ ಮೈಸೂರು ಮಿಡ್-ಟೌನ್, ಅಧ್ಯಕ್ಷ ಮನೋಜ್ ಕುಮಾರ್, ರೋಟರಿ ಪಂಚಶೀಲ್ ಅಧ್ಯಕ್ಷ ಪ್ರೇಮ್ ಶೆರಾಫ್ ಮತ್ತಿತರರು ಉಪಸ್ಥಿತರಿದ್ದರು. : - - -