ಭಾರಿಮಳೆಗೆ ಮನೆಯ ಗೋಡೆ ಕುಸಿದು ತಾಯಿ ಮಗ ಸಾವು… ದಾವಣಗೆರೆ,ಆ,14,2019(..): ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ತಾಯಿ ಮತ್ತು ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೂದಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಉಮಾದೇವಿ(30), ಧನುಷ್(3) ಮೃತಪಟ್ಟವರು. ರಾತ್ರಿ ತಾಯಿ ಉಮಾದೇವಿ ಹಾಗೂ ಮಗ ಧನುಷ್ ಮಲಗಿದ್ದ ವೇಳೆ ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನ ಆಸ್ಪತ್ರೆಗೆ ರವಾನಿಸುವಾಗ ಮಾರ್ಗಮಧ್ಯದಲ್ಲಿ ಮಗ ಧನುಷ್ ಹಾಗೂ ಆಸ್ಪತ್ರೆಯಲ್ಲಿ ತಾಯಿ ಉಮಾದೇವಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸಂತೆ ಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - - - --