ಇಂದು ಮೈಮುಲ್ ಅಧ್ಯಕ್ಷರ ಚುನಾವಣೆ: ಬಿಎಸ್ ವೈ ಸಂಬಂಧಿ ಮತ್ತು ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತನ ನಡುವೆ ತೀವ್ರ ಪೈಪೋಟಿ…. ಮೈಸೂರು,ಆ,14,2019(..): ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಇಂದು ಡೈರಿ ಆವರಣದಲ್ಲಿ 1 ಗಂಟೆಗೆ ಚುನಾವಣೆ ನಡೆಯಲಿದ್ದು ಅಧ್ಯಕ್ಷ ರ ಚುನಾವಣೆ ಗೆ ಮಾವನಹಳ್ಳಿ ಸಿದ್ದೇಗೌಡ ಹಾಗೂ ಅಶೋಕ್ ನಾಮಪತ್ರ ಸಲ್ಲಿಸಿದ್ದಾರೆ. ಅಶೋಕ್ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹೋದರಿ ಪುತ್ರರಾಗಿದ್ದು ಮಾವನಹಳ್ಳಿ ಸಿದ್ದೇಗೌಡ ಅವರು ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತರಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ. ಮೈಮೂಲ್ ಅಧ್ಯಕ್ಷ ರ ಚುನಾವಣೆಯನ್ನ ಮಾಜಿ ಸಚಿವ ಜಿ ಟಿ ದೇವೇಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕಳೆದ ಭಾರಿ ಕೊರಂ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. : ---- -