ರಾವುಲ್ಲಾ…. ಬೆಳ್ಳುಳ್ಳಿ ರೇಟ್ ಕೇಳಿ ರಾಜ್ಯದ ಜನ ದಂಗಾದ್ರಲ್ಲಾ…!? ಮೈಸೂರು,ಫೆಬ್ರವರಿ,14,2024(..):ಅತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ ( )​ ಸಾಕಷ್ಟು ಟ್ರೆಂಡ್​​ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ ( ) ಗಗನಕ್ಕೆ ಏರಿದೆ. ಇದರಿಂದ ಬೆಳ್ಳುಳ್ಳಿಯಿಂದ ತಯಾರಿಸುವ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳ್ಳುಳ್ಳಿ ಕಬಾಬ್​ ತಿನ್ನಬೇಕೆಂಬ ಆಸೆ ಇಟ್ಟುಕೊಂಡವರಿಗೆ ಬೆಲೆಯ ಬಿಸಿ ತಟ್ಟಲಿದೆ. ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ () ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೆಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ. ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ ಮಾತನಾಡಿ, ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 40 ಕೆಜಿ ತೂಕವಿರುವ 3,000 ಬೆಳ್ಳುಳ್ಳಿ ಚೀಲ ಬರುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿದೆ ಎಂದು ಹೇಳಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಕಾಗುತ್ತಿಲ್ಲ. ರಾಜ್ಯವು ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಈಗ, ನಾವು ಮಧ್ಯಪ್ರದೇಶದಿಂದ ಮಾತ್ರ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದಲೂ ಪೂರೈಕೆ ಪುನರಾರಂಭವಾಗುತ್ತದೆ ಮತ್ತು ದರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು. ವಿವಿಧ ಜಿಲ್ಲೆಗಳಲ್ಲಿನ ಬೆಳ್ಳುಳ್ಳಿ ದರ ಜಿಲ್ಲೆ ಬೆಳ್ಳುಳ್ಳಿ ದರ ಕೆಜಿಗೆ (ರೂ.) ಬಾಗಲಕೋಟೆ 320 – 350 ವಿಜಯಪುರ ಜವಾರಿ 280 – 300 ಹೈಬ್ರಿಡ್ 150 – 180 ಚಿಕ್ಕಮಗಳೂರು 300 – 320 ಕೊಪ್ಪಳ ಜವಾರಿ 350 ಹೈಬ್ರೀಡ್ 200 ಚಾಮರಾಜನಗರ 310 – 330 ಕಲಬುರಗಿ 300 – 320 ಧಾರವಾಡ 300 – 320 ಬೀದರ್ 400 – 450 ಚಿತ್ರದುರ್ಗ 300 – 320 ರಾಯಚೂರು 300 – 320 ಬಳ್ಳಾರಿ 350 – 370 ಮಂಡ್ಯ 360 – 400 ಕೋಲಾರ 350 – 400 ತುಮಕೂರು 300 – 320 ಚಿಕ್ಕಬಳ್ಳಾಪುರ 350 – 400 ದಾವಣಗೆರೆ ಜವಾರಿ 280 – 300 ಹೈಬ್ರಿಡ್ 240 – 280 ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥ ತಯಾರಿಸಲು ಮೈಸೂರು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಬೆಳ್ಳುಳ್ಳಿ ಬೆಲೆ ದಿನೆ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥಗಳನ್ನು ಮಾಡಲು ಎಲ್ಲ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ತಿಳಿಸಲಾಗಿದೆ. ಬೆಳ್ಳುಳ್ಳಿ ಬಳಸದ ಕರಿಗಳಿಗೆ ಶೇ10% ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ನಿತ್ಯ ಒಂದಲ್ಲ ಒಂದು ಪದಾರ್ಥದ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಹೋಟೆಲ್ ನಡೆಸುವುದು ಕಷ್ಟವಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಹೇಳಿದ್ದಾರೆ. : - –-