ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಶಿವಮೊಗ್ಗಕ್ಕೆ 50 ಕೋಟಿ ಘೋಷಿಸಿದ ಸಿಎಂ ಬಿಎಸ್ ಯಡಿಯೂರಪ್ಪ… ಶಿವಮೊಗ್ಗ,ಆ,13,2019(..): ಮನೆಕಳೆದುಕೊಂಡಿರುವ ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ನೆರೆ ಪಿಡೀತ ಪ್ರದೇಶಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಇಂದು ರಾಜೀವ್ ಗಾಂಧಿ ಬಡಾವಣೆ, ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮ ಸೇರಿ ಹಲವು ಕಡೆಗೆ ಭೇಟಿ ನೀಡಿ ಸಿಎಂ ಬಿಎಸ್ ಯಡಿಯೂರಪ್ಪ ಪರಿಸ್ಥಿತಿ ಅವಲೋಕಿಸಿದರು. ನಂತರ ಪ್ರವಾಹದಲ್ಲಿ ಮನೆ ಸಂಪೂರ್ಣ ನಾಶವಾದವರಿಗೆ 5 ಲಕ್ಷ ಮನೆ ಹಾನಿಯಾದವರಿಗೆ ದುರಸ್ತಿಗಾಗಿ 1 ಲಕ್ಷ ಪರಿಹಾರ ಘೋಷಣೆ ಮಾಡಿದರು. ಈ ಮಧ್ಯೆ ಆಸ್ತಿ ಪಾಸ್ತಿ, ರಸ್ತೆ, ಸೇತುವೆ ದುರಸ್ತಿಗಾಗಿ ಶಿವಮೊಗ್ಗ ನಗರಕ್ಕೆ ಸಿಎಂ ಬಿಎಸ್ ವೈ 50 ಕೋಟಿ ಹಣ ಘೋಷಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ, ಪ್ರವಾಹದಲ್ಲಿ ಸಂಪೂರ್ಣವಾಗಿ ಮನೆಕಳೆದುಕೊಂಡವರಿಗೆ 5 ಲಕ್ಷ ಮನೆಹಾನಿಯಾದವರಿಗೆ 1 ಲಕ್ಷ ಪರಿಹಾರ ಶೀಘ್ರದಲ್ಲೇ ಮಂಜೂರು ಮಾಡುತ್ತೇವೆ. ಅಗತ್ಯ ಸಾಮಾಗ್ರಿಗಾಗಿ ತಕ್ಷಣದಲ್ಲಿ ನೆರೆ ಸಂತ್ರಸ್ತರಿಗೆ 10 ಸಾವಿರ ರೂ ಪರಿಹಾರ ನೀಡಿದ್ದೇವೆ. 40 ಸಾವಿರ ಕುಟುಂಬಗಳ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. : 5 - – - - 50 -