ಮೈಸೂರಿನಲ್ಲಿ ಮತ್ತೊಂದು ಬಲಿ: ನದಿಯಲ್ಲಿ ಜಾರಿಬಿದ್ದು ಮಹಿಳೆ ಸಾವು… ಮೈಸೂರು,ಆ,12,2019(..) ಧಾರಾಕಾರ ಮಳೆ, ಪ್ರವಾಹದಿಂದಾಗಿ ಹಲವು ಮಂದಿ ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. ಇದೀಗ ಮಳೆಯ ಅವಾಂತರದಿಂದ ಮೈಸೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಲಕ್ಷ್ಮಣ ತೀರ್ಥನದಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಬಳಿ ಈ ಘಟನೆ ನಡೆದಿದೆ. ಹರವೆ ಗ್ರಾಮದ ರತ್ನಮ್ಮ (50) ಮೃತ ಮಹಿಳೆ. ರತ್ನಮ್ಮ ಚೆನ್ನಸೋಗೆ ಗ್ರಾಮದಿಂದ ಹರವೆ ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದ ವೇಳೆ ಕೆಸರಿನಿಂದಾಗಿ ಕಾಲು ಜಾರಿ ಬಿದ್ದು ಲಕ್ಷ್ಮಣ ತೀರ್ಥನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತದೇಹ ಪತ್ತೆಯಾಗಿದೆ. ಮಳೆಯ ಆರ್ಭಟ ಕಡಿಮೆಯಾದರೂ ಇದರ ಪರಿಣಾಮ ಇನ್ನು ತಟ್ಟುತ್ತಲೆ ಇದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. : -- - - -.