ಹೊಗೆನಕಲ್ ಜಲಪಾತಕ್ಕೆ ಪ್ರವೇಶ ನಿರ್ಬಂಧ ಬೆಂಗಳೂರು, ಆಗಸ್ಟ್ 08, 2019 (..):: ಕಾವೇರಿ ಹೊರ ಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಮಂಡ್ಯ, ಚಾಮರಾಜನಗರ ಇನ್ನಿತರೆ ಪ್ರದೇಶಗಳಲ್ಲಿ ಮಳೆಯಾಗದಿದ್ದರೂ ಕೂಡ, ಕಾವೇರಿ ಜಲಾಶಯ ಭರ್ತಿಯಾಗಿರುವುದರಿಂದ ಹೊರ ಹರಿವು ಕೂಡ ಹೆಚ್ಚಳವಾಗಿದೆ. ಅಪಾಯ ಇರುವ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅಪಾಯದ ಮಟ್ಟ ಮೀರಿ ನೀರು ಬರುತ್ತಿರುವುದರಿಂದ ಪ್ರವಾಸಿಗರು ನದಿಗೆ ಇಳಿಯುವುದಕ್ಕೆ ಹಾಗೂ ತೆಪ್ಪ ಸವಾರಿ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಜಲಪಾತದ ಸುತ್ತಮುತ್ತಲಿನ ಗ್ರಾಮಗಳಾದ ಜಮ್ಮಕುಟ್ಟಿ, ಆಲಂಬಾಂಡಿ ಮಾರಿಕೋಟೈ, ಗೋಫಿನಾಥಂ, ಆತೂರು, ಕೋಟೊಯೂರು, ವಿವಿಧ ಗ್ರಾಮಗಳಲ್ಲಿನ ಜನರು ನದಿ ದಡಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.