ಧಾರಾಕಾರ ಮಳೆ: ಕೊಡಗಿನಲ್ಲಿ ಮಣ್ಣು ಕುಸಿದು ನಾಲ್ವರು ಸಾವು… ಕೊಡಗು,ಆ,9,2019(..): ಕೊಡಗಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಮಣ್ಣು ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ಸಮೀಪದ ಕೊರಂಗಾಲದಲ್ಲಿ ಈ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಮಣ್ಣು ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಯಶ್ವಂತ್, ಬಾಲಕೃಷ್ಣ, ಯಮುನಾ ಉದಯ್ ಮೃತಪಟ್ಟವರು. ಕೊಡಗಿನಲ್ಲಿ. ವರುಣನ ಆರ್ಭಟದಿಂದಾಗಿ 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. – . , , . : - - - -