ಮೈಸೂರಿನಲ್ಲಿ ಮಳೆರಾಯನ ಆರ್ಭಟ: ಧರೆಗುರುಳಿದ ಅಗ್ನಿಶಾಮಕ ಠಾಣಾ ಕಚೇರಿಯ ಕಟ್ಟಡ…. ಮೈಸೂರು,ಆ,9,2019(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಸರಸ್ವತಿ ಪುರಂ ಬಳಿ ಇರುವ ಅಗ್ನಿಶಾಮಕ ಕಚೇರಿಯ ಕಟ್ಟಡ ಧರೆಗುಳಿದಿದೆ. ಮೈಸೂರಿನ ಸರಸ್ವತಿ ಪುರಂನ ಅಗ್ನಿಶಾಮಕ ಠಾಣೆ ಕಟ್ಟಡದ ಮುಂಭಾಗವೇ ಮಳೆ ಹೊಡೆತಕ್ಕೆ ಕುಸಿದು ಬಿದ್ದ ಘಟನೆ ನಡೆದಿದೆ. ಇಂದು ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಯಾವುದೇ ಅಪಾಯ ಕಂಡು ಬಂದಿಲ್ಲ.ಅದೃಷ್ಟವಶಾತ್ ಇಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಇಲ್ಲದಿದ್ದರೆ ಸಮೀಪದ ಶಾಲಾ. ಕಾಲೇಜು ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಬಸ್ ಗಾಗಿ ಕಾಯುತ್ತಿದ್ದರು. ಆಗ ಅನಾಹುತ ಉಹಿಸಲು ಆಗುತ್ತಿರಲಿಲ್ಲ. ಕಳೆದ ಕೆಲದಿನಗಳಿಂದ ಮೈಸೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಕಟ್ಟಡ ಶಿಥಿಲವಾಗಿ ಈ ಘಟನೆ ನಡೆದಿದೆ. ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನತೆ ತೊಂದರೆಗೀಡಾಗಿದ್ದಾರೆ. : - - – -