ಧರಣಿನಿರತ ರೈತರ ಬಂಧನ ಖಂಡನೀಯ- ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರು,ಫೆಬ್ರವರಿ,13,2024(..): ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ದ ಹಲವು ರಾಜ್ಯಗಳ ರೈತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ರೈತರಿಗೆ ತಡೆಯೊಡ್ಡಿ ಬಂಧಿಸಲಾಗುತ್ತಿದೆ ಇದು ಖಂಡನೀಯ ಎಂದು ಕೇಂದ್ರ ಸರ್ಕಾರದ ವಿರುದ್ದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧರಣೀನಿರತ ರೈತರನ್ನ ಬಂಧಿಸುವುದು ಖಂಡನೀಯ. ದೆಹಲಿಯಲ್ಲಿ ರೈತರ ಹೋರಟ ನಡೆಯುತ್ತಿದೆ. ಪ್ರತಿಭಟನೆಗೆ ಹೋಗದಂತೆ ರೈತರನ್ನ ತಡೆಯಲಾಗುತ್ತಿದೆ ಎಲ್ಲರಿಗೂ ಪ್ರತಿಭಟನೆ ಹಕ್ಕಿದೆ. ಹೀಗಾಗಿ ಪ್ರತಿಭಟನೆಗೆ ತೆರಳುತ್ತಿರುವ ರೈತರನ್ನ ತಡೆಯುವುದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ. : – – – - - .