ಸುಷ್ಮಾ ಸ್ವರಾಜ್ ಜೀವನ-ಸಾಧನೆ ತೆರೆಮೇಲೆ: ನಟಿಸಲು ನಾನು ರೆಡಿ ಎಂದ ತಾಪ್ಸಿ ಬೆಂಗಳೂರು, ಆಗಸ್ಟ್ 09, 2019 (..): ದಿವಂಗತ ಸುಷ್ಮಾ ಸ್ವರಾಜ್ ಜೀವನ-ಸಾಧನೆ ತೆರೆ ಮೇಲೆ ಬರಲಿದೆ. ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಆಗಿ ತೆರೆಯ ಮೇಲೆ ಬರಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸುಷ್ಮಾ ಬಯೋಪಿಕ್​​ನಲ್ಲಿ ನಟಿಸುವ ಅವಕಾಶ ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್​ ಬಯೋಪಿಕ್​ನಲ್ಲಿ ಯಾರು ತಾನೆ ನಟಿಸಲು ಬಯಸೋಲ್ಲ ಹೇಳಿ?. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ.