ತಾರಕಾ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆ: ನದಿ ಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಿವಂತೆ ಸೂಚನೆ.. ಮೈಸೂರು,ಆ,8,2019(..): ತಾರಕಾ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆ ತಾರಾಕ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ನದಿ ಪಾತ್ರದಲ್ಲಿರೊ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿವಂತೆ ಸೂಚನೆ ನೀಡಲಾಗಿದೆ. ಎಚ್ ಡಿ ಕೋಟೆ ಪುರಸಭೆ ಈ ಪ್ರಕಟಣೆ ಹೊರಡಿಸಿದೆ. ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಆಟೋದಲ್ಲಿ ಮೈಕ್ ಮೂಲಕ ಸೂಚನೆ ನೀಡಲಾಗಿದ್ದು, ಎಚ್. ಡಿ ಕೋಟೆ ಅಂಬೇಡ್ಕರ್ ಭವನದಲ್ಲಿ ಗಂಜಿ ಕೇಂದ್ರ ತೆರಯಲಾಗಿದೆ.. ಸಂತ್ರಸ್ತರು ಗಂಜಿ ಕೇಂದ್ರದ ಉಪಯೋಗ ಪಡೆದುಕೊಳ್ಳುವಂತೆ ಪ್ರಚಾರ ಮಾಡಲಾಗಿದೆ. : - - - – – .