ಲಾಸ್ ಏಂಜಲೀಸ್ ದುಬಾರಿ ಬಂಗಲೆ ಮಾರಾಟ ಮಾಡಿದ ಪ್ರಿಯಾಂಕ ಅಮೆರಿಕ, ಆಗಸ್ಟ್ 08, 2019 (..): ನಟಿ ಪ್ರಿಯಾಂಕಾ ಚೋಪ್ರಾ ಆರು ತಿಂಗಳ ಹಿಂದೆ ಲಾಸ್ ಏಂಜಲೀಸ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ್ದರು. ಆ ಬಂಗಲೆಯನ್ನ ಈಗ ಮಾರಾಟ ಮಾಡಿದ್ದಾರೆ. 5 ಬೆಡ್ ರೂಂ, ಸ್ವಿಮ್ಮಿಂಗ್‌ ಪೂಲ್ ಹೊಂದಿದ್ದ ದುಬಾರಿ ಮನೆಯನ್ನ 6.8 ಮಿಲಿಯನ್ ಡಾಲರ್ (48 ಕೋಟಿ)ಗೆ ಸೇಲ್ ಮಾಡಿದ್ದಾರೆ. ಆರು ತಿಂಗಳು ಈ ಮನೆಯಲ್ಲಿ ಸಾಂಸಾರಿಕ ಜೀವನ ನಡೆಸಿದ್ದ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಈಗ ಹೊಸ ಮನೆ ಖರೀದಿ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ.