ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವ ಮಹಿಳೆ ರಕ್ಷಣೆ… ಮೈಸೂರು,ಆ,6,2019(..): ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೋಲಿಸರು ದಾಳಿ ನಡೆಸಿ ಓರ್ವ ಮಹಿಳೆಯನ್ನ ರಕ್ಷಿಸಿದ್ದಾರೆ. ಡಿಸಿಪಿ ಮುತ್ತುರಾಜ್ ಮಾರ್ಗದಲ್ಲಿ ಹಾಗೂ ಜಯಲಕ್ಷ್ಮೀಪುರಂ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್, ಸಿಸಿಬಿ ಇನ್ಸ್ಪೆಕ್ಟರ್ ಎ.ಮಲ್ಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಗಮ್ಮ ಎಂಬ ಮಹಿಳೆಯ ಬಂಧಿಸಿದ್ದಾರೆ. ಇದೇ ವೇಳೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಸಯ್ಯದ್ ಪಾಷಾ ಬಿನ್ ಅಬ್ದುಲ್ ಗಫಾರ್ ಎಂಬಾತನನ್ನೂ ಸಹ ಅರೆಸ್ಟ್ ಮಾಲಾಗಿದೆ. ಮಹಿಳೆಯರನ್ನು ಹಾಗೂ ಗಿರಾಕಿಗಳನ್ನು ಕರೆಸಿಕೊಂಡು ಅವರಿಂದ ಹಣ ಪಡೆದು ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ದಾಳಿಯ ವೇಳೆ 3 ಮೊಬೈಲ್ ಫೋನ್, ಹಾಗೂ 4 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - -- - -.