ಒಡನಾಡಿ ಸಂಸ್ಥೆಗೆ ಆಗಮಿಸಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೆ ಹುಟ್ಟಹಬ್ಬದ ಶುಭಕೋರಿದ ಜಿ.ಟಿ ದೇವೇಗೌಡ… ಮೈಸೂರು,ಆ,6,2019(..): ಇಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಜನ್ಮದಿನವಾಗಿದ್ದು ಈ ಹಿನ್ನೆಲೆ ಮಾಜಿ ಸಚಿವ ಜಿ.ಟಿ ದೇವೇಗೌಡ ಬರ್ತಡೆ ವಿಶ್ ಮಾಡಿದರು. ಮೈಸೂರಿನ ಒಡನಾಡಿಯಲ್ಲಿ ಸಂಸ್ಥೆಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಜನ್ಮದಿನ ಆಚರಿಸಿಕೊಂಡರು. ಒಡನಾಡಿ ಸಂಸ್ಥೆಗೆ ಆಗಮಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ ಶ್ರೀನಿವಾಸ್ ಪ್ರಸಾದ್ ಅವರಿಗೆ ಶಾಲು ಹಾಕಿ ಜನ್ಮದಿನದ ಶುಭಾಶಯ ತಿಳಿಸಿದರು. ಈ ವೇಳೆ ಶ್ರೀನಿವಾಸ್ ಪ್ರಸಾದ್ ಹಾಗೂ ಜಿಟಿ ದೇವೇಗೌಡರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸಿದರು. ಇವರಿಬ್ಬರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. : - - - -