‘ಆರ್ಟಿಕಲ್‌ 15’ ರಿಮೇಕ್ ಗೆ ಧನುಷ್ ಉತ್ಸಾಹ ಬೆಂಗಳೂರು, ಆಗಸ್ಟ್ 06, 2019 (..): ‘ಆರ್ಟಿಕಲ್‌ 15’ ಚಿತ್ರ ರಿಮೇಕ್ ಮಾಡಲು ನಟ ಧನುಷ್ ಆಸಕ್ತಿ ತೋರಿದ್ದಾರೆ. ವಿಮರ್ಶಕರಿಂದಲೂ ಸಾಕಷ್ಟು ಪ್ರಶಂಸೆ ಪಾತ್ರವಾಗಿರುವ ‘ಆರ್ಟಿಕಲ್ 15’ ಚಿತ್ರವನ್ನು ತಮಿಳು ಭಾಷೆಯಲ್ಲಿ ರಿಮೇಕ್‌ ಮಾಡಲು ನಟ ಧನುಷ್‌ ತೀವ್ರ ಉತ್ಸಾಹ ತೋರಿದ್ದಾರೆ. ಚಿತ್ರದ ರಿಮೇಕ್‌ ಹಕ್ಕನ್ನು ಶೀಘ್ರವಾಗಿ ಧನುಷ್ ಪಡೆಯಲಿದ್ದಾರೆ. ಕಾಲಿವುಡ್‌ನ ಅನೇಕರು ಸಿನಿಮಾದ ಹಕ್ಕು ಪಡೆಯಲು ಪ್ರಯತ್ನಿಸುತ್ತಿದ್ದಾರೆ.