ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಠಿಸಿದೆ ಭಾರತ-ಪಾಕ್ ಮೂಲದ ಸಲಿಂಗಿ ಜೋಡಿಯ ಈ ಫೋಟೋ ಶೂಟ್ ನವದೆಹಲಿ:ಆ-4:(..) ಅಮೆರಿಕದ ನ್ಯೂಯಾರ್ಕ್​ನಲ್ಲಿ ಸಲಿಂಗಿ ಜೋಡಿಯೊಂದು ಮಾಡಿಸಿರುವ ಫೋಟೊಶೂಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಭಾರತ ಹಾಗೂ ಪಾಕಿಸ್ತಾನದ ಸಲಿಂಗಿಗಳ ಈ ಫೋಟೋಗಳನ್ನು ಫೋಟೊಗ್ರಾಫರ್​ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ವೈರಲ್​ ಆಗಿರುವ ಸಲಿಂಗ ಜೋಡಿ ಭಾರತ ಮತ್ತು ಪಾಕಿಸ್ತಾನ ಮೂಲದವರಾಗಿದ್ದು, ಭಾರತದ ಅಂಜಲಿ ಛಕ್ರ ಹಾಗೂ ಪಾಕಿಸ್ತಾನದ ಸುಂದಾಸ್​ ಮಲಿಕ್ ಎಂದು ಗುರುತಿಸಲಾಗಿದೆ. ಸರೋವರ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಫೋಟೊಗ್ರಾಫರ್​ ಫೋಟೊಗಳನ್ನು ಶೇರ್​ ಮಾಡಿದ್ದು, ಅದಕ್ಕೆ ನ್ಯೂಯಾರ್ಕ್​ ಪ್ರೇಮ ಕತೆ ಎಂದು ಶೀರ್ಷಿಕೆ ನೀಡಿದ್ದಾರೆ. ಇಬ್ಬರು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳಾದ ಸೀರೆ ಮತ್ತು ಲೆಹಂಗಾವನ್ನು ಧರಿಸಿ, ಚಿನ್ನದ ಆಭರಣಗಳನ್ನು ತೊಟ್ಟು ಮಳೆಯ ನಡುವೆ ಕೊಡೆಯ ಕೆಳಗೆ ಮಂದಸ್ಮಿತರಾಗಿ ತೆಗೆಸಿಕೊಂಡಿರುವ ವಿವಿಧ ಫೋಟೊಗಳು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಕೆಲ ಫೋಟೊಗಳಲ್ಲಿ ಸಲಿಂಗಿ ಜೋಡಿ ನ್ಯೂಯಾರ್ಕ್​ನ ಸುಂದರ ತಾಣವೊಂದರಲ್ಲಿ ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದು, ವಿವಾಹ ವಾರ್ಷಿಕೊತ್ಸವದ ಸಂದರ್ಭದಲ್ಲಿ ತೆಗೆದ ಫೋಟೊಗಳು ಎಂದು ಹೇಳಲಾಗಿದೆ.