ರಾಜ್ಯದಲ್ಲಿ 50 ಲಕ್ಷ ಬಿಜೆಪಿ ಸದಸ್ಯತ್ವ ಮಾಡಲು ತೀರ್ಮಾನ: ಇದಕ್ಕೆ ಪೂರ್ಣ ಸಮಯ ಮೀಸಲಿಡಿ- ಕಾರ್ಯಕರ್ತರಿಗೆ ಸಿಎಂ ಬಿಎಸ್ ವೈ ಸೂಚನೆ… ಬೆಂಗಳೂರು,ಆ,3,2019(..): ರಾಜ್ಯದಲ್ಲಿ 50 ಲಕ್ಷ ಬಿಜೆಪಿ ಸದಸ್ಯತ್ವ ಮಾಡಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಪೂರ್ಣ ಸಮಯಾವಕಾಶ ಮೀಸಲಿಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಅಭಿಯಾನದ ಮೂಲಕ ರಾಜ್ಯದಲ್ಲಿ 50 ಲಕ್ಷ ಬಿಜೆಪಿ ಸದಸ್ಯತ್ವ ಸೃಷ್ಟಿಸುವ ಗುರಿ ಇದೆ. ಹೀಗಾಗಿ ಇದಕ್ಕೆ ಕಾರ್ಯಕರ್ತರು ಶ್ರಮಿಸಬೇಕು ತಮ್ಮ ಪೂರ್ಣ ಸಮಯವನ್ನ ಇದಕ್ಕೆ ಮೀಸಲಿಡಬೇಕು. ಇದಲ್ಲದೆ ಸಂಸದರು, ಶಾಸಕರು ಸಹ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಸಂಘಟನೆ ಮೂಲಕ ಬಿಬಿಎಂಪಿ ಇತರೇ ಚುನಾವಣೆಗಳನ್ನ ಗೆಲ್ಲಬೇಕು ಎಂದು ಹೇಳಿದರು. : – – 50 - -- - -.