: ಉಗ್ರರ ದಾಳಿ ಭೀತಿ : ಅಮರನಾಥ ಯಾತ್ರೆ ಮೊಟಕುಗೊಳಿಸಿ ಹಿಂದಿರುಗುವಂತೆ ಯಾತ್ರಾರ್ಥಿಗಳಿಗೆ ಸೂಚಿಸಿದ ಸರಕಾರ. ನವದೆಹಲಿ, ಆ.02, 2019 : (.. ) : ಅಮರನಾಥ ಯಾತ್ರೆಗೆಂದು ತೆರಳಿರುವ ಯಾತ್ರಾರ್ಥಿಗಳು ಈ ಕೂಡಲೇ ಪ್ರವಾಸ ಮೊಟಕುಗೊಳಿಸಿ ಸ್ವಕ್ಷೇತ್ರಕ್ಕೆ ಹಿಂದಿರುವಂತೆ ಜಮ್ಮು-ಕಾಶ್ಮೀರ ಆಡಳಿತ ಸೂಚನೆ ನೀಡಿದೆ. ಉಗ್ರರ ಶಂಕಿತ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಮ್ಮು-ಕಾಶ್ಮೀರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಅದೇಶ ಹೊರಡಿಸಿರುವ ರಾಜ್ಯ ಸರಕಾರ, ಅಮರನಾಥ ಯಾತ್ರೆಗೆ ಆಗಮಿಸಿರುವವರನ್ನು ಗುರಿಯನ್ನಾಗಿರಿಸಿಕೊಂಡು ಉಗ್ರರು ದಾಳಿ ನಡೆಸುವ ಬಗೆಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಕೂಡಲೇ ಯಾತ್ರೆ ಮೊಟಕುಗೊಳಿಸಿ ತಮ್ಮ ತಮ್ಮ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. – : – -- - - – #