ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ಆಸ್ಪತ್ರೆಗೆ ದಾಖಲು ಬೆಂಗಳೂರು,ಆ,2,2019(..): ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮನ್ಸೂರ್ ಖಾನ್ ನನ್ನ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನ್ಸೂರ್ ಖಾನ್ ಎದೆನೋವಿನಿಂದ ಬಳಲುತ್ತಿದ್ದದ್ದು, ನಿನ್ನೆಯಷ್ಟೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಿ ಆದೇಶ ನೀಡಿತ್ತು. ನಿನ್ನೆ ನ್ಯಾಯಾಲಯ ಆದೇಶ ಇದ್ದ ಹಿನ್ನೆಲೆ ನಿನ್ನೆ ರಾತ್ರಿಯೇ ಜಯದೇವ ಆಸ್ಪತ್ರೆಗೆ ಮನ್ಸೂರ್ ಖಾನ್ ಸೇರಿಸಲಾಗಿದೆ. ಮನ್ಸೂರ್ ಖಾನ್ ಗೆ ಅಕ್ಯೂಟ್ ಕೊರೊನರಿ ಸಿಂಡ್ರೋಮ್ ಖಾಯಿಲೆ ಇರುವ ಹಿನ್ನೆಲೆ, ಅಗತ್ಯ ಬಿದ್ದಲ್ಲಿ ಜಯದೇವ ಆಸ್ಪತ್ರೆಯ ಚಿಕಿತ್ಸೆಗೆ ಕೋರ್ಟ್ ಅವಕಾಶ ನೀಡಿತ್ತು. ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿತ್ಸೆಗೆ ಅವಕಾಶ ನೀಡಲು ಮನ್ಸೂರ್ ವಕೀಲರ ವಾದ ಮಂಡಿಸಿದ್ದರು. ಆದರೆ ವಿಕ್ಟೋರಿಯಾ ಆಸ್ಪತ್ರೆ ಬೇಡ ಎಂದು ಎಸ್ಐಟಿ, ಇಡಿ ವಕೀಲರು ವಾದ ಮಂಡಿಸಿದ್ದರು. ಅಂತಿಮ‌ವಾಗಿ ನ್ಯಾಯಾಲಯ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಿತ್ತು : - - - -