ಪತಿ ಹರಿಕೃಷ್ಣ ವಿರುದ್ಧವೇ ಬೇಸರ ವ್ಯಕ್ತಪಡಿಸಿದ ವಾಣಿ ಹರಿಕೃಷ್ಣ ಬೆಂಗಳೂರು, ಆಗಸ್ಟ್ 02, 2019 (..): ಗಾಯಕಿ ವಾಣಿ ಹರಿಕೃಷ್ಣ, ಪತಿ ಹರಿಕೃಷ್ಣ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಬಳಿ ಒಮ್ಮೆ ಹಾಡಿಸಿದ ಹಾಡನ್ನ ಮತ್ತೆ ಬೇರೆ ಗಾಯಕರ ಬಳಿ ಹಾಡಿಸಿದ್ದಕ್ಕೆ, ವಾಣಿ ಬೇಸರಗೊಂಡಿದ್ದು, ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಪತಿ ಹರಿಕೃಷ್ಣ ಯಾವ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿರುತ್ತಾರೋ ಆ ಚಿತ್ರಕ್ಕೆ ತಾನು ಹಾಡುವುದಿಲ್ಲವೆಂದು ವಾಣಿ, ‘ಬದುಕೇ ಬೇಡ ಅನ್ನಿಸಿಬಿಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.