ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: 17 ಅನರ್ಹ ಶಾಸಕರ ಕ್ಷೇತ್ರಕ್ಕೆ ವೀಕ್ಷಕರ ನೇಮಕ…. ಬೆಂಗಳೂರು,ಆ,2,2019(..): ಅನರ್ಹಗೊಂಡಿರುವ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಸಿದ್ಧತೆ ನಡೆಸುತ್ತಿದ್ದು ಈ ನಡುವೆ 17 ಕ್ಷೇತ್ರಗಳಿಗೆ ವೀಕ್ಷಕರನ್ನ ಕಾಂಗ್ರೆಸ್ ನೇಮಕ ಮಾಡಿದೆ. ಆರ್. ಆರ್ ನಗರಕ್ಕೆ ಸಂಸದ ಡಿ.ಕೆ ಸುರೇಶ್, ಕೆ.ಆರ್ ಪುರಂ ಕ್ಷೇತ್ರಕ್ಕೆ ಕೆ.ಜೆ ಜಾರ್ಜ್, ಯಶವಂತಪುರ ಕ್ಷೇತ್ರಕ್ಕೆ ಎಂ.ಕೃಷ್ಣಪ್ಪ ಮತ್ತು ಜಮೀರ್ ಅಹ್ಮದ್ ಖಾನ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮಾಗಡಿ ಬಾಲಕೃಷ್ಣ, ಕೆ.ಆರ್ ಪೇಟೆ ಕ್ಷೇತ್ರಕ್ಕೆ ಚಲುವರಾಯಸ್ವಾಮಿ, ಹುಣಸೂರು ಕ್ಷೇತ್ರಕ್ಕೆ ಮಾಜಿ ಸಚಿವ ಮಹದೇವಪ್ಪರನ್ನ ನೇಮಕ ಮಾಡಿದೆ. ಹಾಗೆಯೇ ರಾಣಿಬೆನ್ನೂರು ಕ್ಷೇಥ್ರಕ್ಕೆ ಹೆಚ್ಎಂ ರೇವಣ್ಣ, ಗೋಕಾಕ್ ಗೆ ಶೀವಾನಂದ ಪಾಟೀಲ್, ಹೊಸಕೋಟೆ ಕೃಷ್ಣೇಭೈರೇಗೌಡ, ಮಸ್ಕಿ ಈಶ್ವರ್ ಖಂಡ್ರೆ, ಹಿರೇಕೆರೂರುಗೆ ಹೆಚ್.ಕೆ ಪಾಟೀಲ್, ಅಥಣಿ ಕ್ಷೇತ್ರಕ್ಕೆ ಎಂ.ಬಿ ಪಾಟೀಲ್, ಕಾಗವಾಡ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರನ್ನ ಕಾಂಗ್ರೆಸ್ ನೇಮಕ ಮಾಡಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅನರ್ಹಗೊಂಡ ಶಾಸಕರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. : - – -- – – -